ಮನದಾಳದ ಭಾವಗಳಿಗೆ ಹೊಲಿದಿರುವೆ ಕಾವ್ಯವೆಂಬರಿವೆ.. ಬೆತ್ತಲೆ ಜಗಕೆ ಜರತಾರಿ ತೊಡಿಸಲು ಹೊರಟ ಹುಂಬ ಮನಸ ಹುಡುಗಿ ನಾ...

ಬುಧವಾರ, ಜನವರಿ 29, 2014

ಬಾಳ ಬಾನ ಚಂದಿರ



ಚಂದ್ರ ಮುಖದ ಚೋರ ಚೆಲುವ
ನನ್ನ ಮನಸ  ಗೆದ್ದು ನಗುವ.. ..!

ನನ್ನ ಜೀವ ತೋಯಿಸಿದ
ನನ್ನ  ಭಾವ  ಬದಲಿಸಿದ
ನನ್ನ  ಆಸೆ  ಅಂಕುರಿಸಿದ
ನನ್ನ  ಅಂತರಾಳ  ಆವರಿಸಿದ .. 

ತಾರಾಚುಕ್ಕಿ  ಮೇಳದಲ್ಲಿ
ಕಾರ್ಗತ್ತಲ ಇರುಳಿನಲ್ಲಿ
ಕಪ್ಪು ಮೋಡದ್  ಹರವಿನಲ್ಲಿ
ಬೆಳದಿಂಗಳು ಸೂಸಿದ  ನನ್ನ ಬಾಳಿನಲ್ಲಿ...

ಮೋಡದಂತೆ ಮನವ ಕವಿದು
ಭಾರೀ ಮಳೆಯ ಸುರಿಸುತಿರುವ
ಧಾತ್ರಿಯಂತೆ ಸವೆಯುತಿರುವೆ
ಕಡಲಂತೆ ಆಶ್ಲೇಷಿಸುತ್ತಿರುವ...... !